ಶಿಕ್ಷಣ ಕ್ಷೇತ್ರದಲ್ಲಿ ಉತ್ತರ ಕನ್ನಡದಲ್ಲಿ ಒಂದು ಹೊಸ ಬದಲಾವಣೆ(ಅತ್ಯುತ್ತಮ ತರಬೇತಿ, ಆಧುನಿಕ ತಂತ್ರಜ್ಞಾನ,)

ಕಳೆದ 20 ವರ್ಷಗಳಿಂದ ಕಂಪ್ಯೂಟರ್ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ  ತರಬೇತಿಗಳನ್ನು ನೀಡುತ್ತಾ,  ಉತ್ತರ ಕನ್ನಡದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆಯನ್ನು ಮಾಡುತ್ತ ಬಂದಿರುವ C-Tech Guru ಅತ್ಯುತ್ತಮ ಶಿಕ್ಷಣ ಸಂಸ್ಥೆ ಎಂಬ ಹೆಸರನ್ನು ಹೊಂದಿದೆ. ಉತ್ತರ ಕನ್ನಡದಲ್ಲಿ ಅತ್ಯುತ್ತಮ ಟ್ಯೂಶನ್ ಸೆಂಟರಿನ ಅನಿವಾರ್ಯತೆಯನ್ನು ಮನಗಂಡ ನಾವು ಕಳೆದ ವರ್ಷ  ಟ್ಯೂಷನ್ ಶಿಕ್ಷಣ ಕ್ಷೇತ್ರಕ್ಕೆ ಪಾದಾರ್ಪಣೆಯನ್ನು ಮಾಡಿರುತ್ತೇವೆ.

ಬೆಳೆಯ ಸಿರಿ ಮೊಳಕೆಯಲ್ಲಿ ಎಂಬಂತೆ ಟ್ಯೂಷನ್   ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿರುವ ನಮ್ಮ ಟ್ಯೂಷನ್ ಸೆಂಟರ್ ನ ಸಾಧನೆ ಜನರ ಹುಬ್ಬೇರುವಂತೆ ಮಾಡಿದೆ. ಎಸ್. ಎಸ್. ಎಲ್. ಸಿ ಹಾಗೂ ಪಿಯುಸಿ 1ನೇ ವರ್ಷದ ಸಾಯನ್ಸ್ ತರಗತಿಯಲ್ಲಿ ಕಡಿಮೆ ಫಲಿತಾಂಶ ಪಡೆದಿರುವಂತ ವಿದ್ಯಾರ್ಥಿಗಳನ್ನೇ      ಗುರಿಯಾಗಿಸಿಕೊಂಡು ಉತ್ತಮ ತರಬೇತಿಯನ್ನು ನೀಡಿ ನಮ್ಮ ಪ್ರತಿಯೊಬ್ಬ (100%) ವಿದ್ಯಾರ್ಥಿಗಳು Distinction ಶ್ರೇಣಿಯಲ್ಲಿ                           ಉತ್ತೀರ್ಣರಾಗುವಂತೆ  ಹಾಗೂ ನಮ್ಮ ಒಬ್ಬ ವಿದ್ಯಾರ್ಥಿ ರಾಜ್ಯ ಮಟ್ಟದಲ್ಲಿ Rank ಪಡೆಯುವಂತೆ ಸಹಕರಿಸಿದ    ನಮ್ಮ ನುರಿತ ಶಿಕ್ಷಕ ವೃಂದ ಹಾಗೂ ನಮ್ಮವಿದ್ಯಾರ್ಥಿ ಮಿತ್ರರು ನಮ್ಮ ವಿದ್ಯಾ ಸಂಸ್ಥೆಯಾದ ಸಿ-ಟೆಕ್ ಗುರು ಟ್ಯೂಷನ್ ಕ್ಲಾಸ್ ಕುಮಟಾ ದ ಗೌರವ ಹೆಚ್ಚಿಸಿದ್ದಾರೆ.

ನಮ್ಮ ವಿದ್ಯಾರ್ಥಿಗಳ ಉತ್ತಮ ಅಭಿವೃದ್ಧಿ ನಮ್ಮ ಟ್ಯೂಷನ್ ಧ್ಯೇಯ.

ವಿದ್ಯಾರ್ಥಿಗಳಿಗೆ ವಿಶೇಷ ಸೂಚನೆ  : ಯಾವುದೇ ಟ್ಯೂಶನ್ ಸೆಂಟರಿನ ಪ್ರವೇಶ ಪಡೆಯುವ ಮೊದಲು  ಕ್ಲಾಸಿನ ಗುಣಮಟ್ಟವನ್ನು  ಪರಿಶೀಲಿಸಿ ಆಮೇಲೆ ಶುಲ್ಕವನ್ನು ನೀಡಿ ನೊಂದಾಯಿಸಿಕೊಳ್ಳಿ. ಯಾರ ಮಾತಿಗೂ ಮರುಳಾಗಬೇಡಿ,  ಉತ್ತಮ ಟ್ಯೂಶನ್ ಸೆಂಟರ್ ಅನ್ನು ಆಯ್ಕೆ ಮಾಡಿ ಉಜ್ವಲ ಭವಿಷ್ಯ ವನ್ನು ಹೊಂದಿರಿ.

S.S.L.C ಗಾಗಿ ಅತ್ಯುತ್ತಮ ಟ್ಯೂಷನ್ ಸೆಂಟರ್ ಹುಡುಕುತ್ತಿದ್ದೀರಾ ? ನಿಮ್ಮ ಚಿಂತೆಗೆ ಪರಿಹಾರ ಇಲ್ಲಿದೆ.

 

 

ನಮ್ಮಲ್ಲಿ ಈಗಾಗಲೇ ದ್ವಿತೀಯ ಪಿಯುಸಿ ಸಾಯನ್ಸ್  ವಿದ್ಯಾರ್ಥಿಗಳಿಗೆ ಟ್ಯೂಷನ್ ತರಗತಿಗಳೂ ಪ್ರಾರಂಭವಾಗಿದ್ದು, ನಿಗದಿತ ಅವಧಿಯಲ್ಲಿ 75 % ವಿಷಯಗಳು ಮುಗಿದಿದ್ದು ವಿದ್ಯಾರ್ಥಿಗಳು ಹಾಗೂ ಪೋಷಕರು ನಮ್ಮ ಟ್ಯೂಷನ್  ತರಗತಿಯ ಗುಣಮಟ್ಟದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ನಮ್ಮ ಅತ್ಯುತ್ತಮ ಶ್ರೇಣಿಯ ಶಿಕ್ಷಕ ವೃಂದದವರು, ಮೇಮೋರಿ ಟ್ರಿಕ್ಸ್ ಹಾಗೂ  ನಮ್ಮಲ್ಲಿರುವ ಅತ್ಯಾಧುನಿಕ ವರ್ಚುವಲ್ ಲ್ಯಾಬೋರೇಟರಿ ಗಳ ಮೂಲಕ ವಿದ್ಯಾರ್ಥಿಗಳಿಗೆ ಅತ್ಯದ್ಭುತ ರೀತಿಯಲ್ಲಿ ವಿಷಯವನ್ನು ಮನದಟ್ಟು ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಬಹಳಷ್ಟು ವಿದ್ಯಾರ್ಥಿಗಳು ಹಾಗೂ ಪೋಷಕರ ಕೋರಿಕೆಯ ಮೇರೆಗೆ S.S.L.C  ವಿದ್ಯಾರ್ಥಿಗಳಿಗೂ ಸಹ ಟ್ಯೂಷನ್ ತರಬೇತಿಯನ್ನು ಪ್ರಾರಂಭಿಸಲು ಇಚ್ಛಿಸಿದ್ದೇವೆ. 15 April  2019 ರಿಂದ ಬೆಳಿಗ್ಗೆ 8.30 ಯಿಂದ ಪ್ರಾರಂಭವಾಗುವುದು.

ಪೋಷಕರು ಹಾಗೂ ವಿದ್ಯಾರ್ಥಿಗಳು ಇಚ್ಚಿಸಿದಲ್ಲಿ ಬೆಳಿಗ್ಗೆ 7 ಗಂಟೆಯಿಂದ ಟ್ಯೂಷನ್ ಕ್ಲಾಸ್ ನ್ನು ಪ್ರಾರಂಭಿಸಲಾಗುವುದು.

Professional Computer Course Admission Started

ವೃತ್ತಿಪರ ಕಂಪ್ಯೂಟರ್ ಕೋರ್ಸಿಗೆ ಅಡ್ಮಿಷನ್ ಪ್ರಾರಂಭವಾಗಿದೆ. ನಮ್ಮಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ಟ್ಯೂಷನ್ ಪಡೆದವರು ಕಂಪ್ಯೂಟರ್ ಕೋರ್ಸ್ ಗೆ ಬಂದು ಉಚಿತವಾಗಿ ತರಬೇತಿಯನ್ನು ಪಡೆಯುತ್ತಿರುತ್ತಾರೆ. ಪಾಲಕರು ಮತ್ತು ವಿದ್ಯಾರ್ಥಿಗಳಿಂದ ಇದರ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಿಯುಸಿ ನಂತರ ವೃತ್ತಿಪರ ಶಿಕ್ಷಣ ಗಳಾದ ಇಂಜಿನಿಯರಿಂಗ್, ಎಂಬಿಬಿಎಸ್ ಅಥವಾ ಯಾವುದೇ ರೀತಿಯ ವೃತ್ತಿ ಶಿಕ್ಷಣಕ್ಕೆ ಕಂಪ್ಯೂಟರ್ ಕೋರ್ಸ್ ಸಹಕಾರಿಯಾಗುತ್ತದೆ. ನಮ್ಮ ಶಿಕ್ಷಣ ಸಂಸ್ಥೆ ಉತ್ತರ ಕನ್ನಡದಲ್ಲಿ ವೃತ್ತಿಪರ ಕೌಶಲ್ಯಕ್ಕೆ ಅತ್ಯುತ್ತಮ ಶಿಕ್ಷಣ ಸಂಸ್ಥೆ ಎಂಬ ಖ್ಯಾತಿಯನ್ನು ಹೊಂದಿರುವ ಏಕೈಕ ಶಿಕ್ಷಣ ಸಂಸ್ಥೆಯಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದಿರುವ ಪ್ರತಿಯೊಬ್ಬ ವಿದ್ಯಾರ್ಥಿಯು ಇದರ ಉಪಯುಕ್ತತೆಯನ್ನು ಪಡೆದುಕೊಳ್ಳಬಹುದು.

ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯಲ್ಲಿ ಒಂದು ಹೊಸ ಕ್ರಾಂತಿ.

16, ಜನವರಿ 2019 ರಂದು ನಡೆದ ಅಂತರ್ ಕಾಲೇಜು ಬ್ಯಾಂಕಿಂಗ್ ಲೇವೆಲ್ – 1 ಆನ್ಲೈನ್ ವಿದ್ಯುನ್ಮಾನ  ಅಣಕು ಪರೀಕ್ಷೆಯಲ್ಲಿ ವಿವಿಧ ಕಾಲೇಜುಗಳ ತರಬೇತಿ ಪಡೆದ  391 ವಿದ್ಯಾರ್ಥಿಗಳು ಭಾಗವಹಿಸಿದ್ದರು, ಸಂಜೆ 7 ಗಂಟೆಗೆ , ಮನೆಯಲ್ಲೇ ಕುಳಿತು ಮೊಬೈಲ್ ಗಳ ಮೂಲಕ ಪರೀಕ್ಷೆಯನ್ನು ಬರೆದರು. ಸಮಯದ ಮಿತಿಯನ್ನು ನಿಗದಿ ಪಡಿಸಲಾಗಿತ್ತು. ಇದು ವಿದ್ಯಾರ್ಥಿಗಳಿಗೆ ಒಂದು ಹೊಸ ಅನುಭವವನ್ನು ನೀಡಿತು. ಈ ರೀತಿ ಮೊಬೈಲ್ ಪರೀಕ್ಷಾ ವಿಧಾನವು ಪೋಷಕರ, ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಪ್ರಶಂಸೆಗೆ ಪಾತ್ರವಾಯಿತು.ಅದರಲ್ಲಿ ಟಾಪ್ ಟ್ವೆಂಟಿ ರಾಂಕ್  ಪಡೆದ ಕಾಲೇಜು ಮತ್ತು ವಿದ್ಯಾರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ. ವಿಜೇತ ವಿದ್ಯಾರ್ಥಿಗಳಿಗೆ ಕಾಲೇಜು ವರ್ಗ ಹಾಗೂ ctechguru ವತಿಯಿಂದ ಹಾರ್ದಿಕ ಅಭಿನಂದನೆಗಳು.

Module- 2  ತರಬೇತಿಗೆ ಭಾಗವಹಿಸಲಿಚ್ಛಿಸುವವರು ಫೆಬ್ರವರಿ,1, 2019 ರ ಒಳಗೆ ತಮ್ಮ ಹೆಸರನ್ನು  ಕಾಲೇಜಿನಲ್ಲಿ ನೋಂದಾಯಿಸಿಕೊಳ್ಳ ತಕ್ಕದ್ದು.

Module-1 ನಲ್ಲಿ ಭಾಗವಹಿಸಿರುವ ಶಿಬಿರಾರ್ಥಿಗಳನ್ನು ವಿಚಾರಿಸಿ, ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳಿ,

“ಭವಿಷ್ಯದಲ್ಲಿ ಕೊರಗಬೇಡಿ”

ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದೆ ಎಂದು ಕೊರಗುವುದು ಬೇಡ. ಮಾಡಿದ ತಪ್ಪನ್ನು ತಿದ್ದಿಕೊಳ್ಳುವುದು ಬಿಡೋದು ನಮ್ಮ ಕೈಯ್ಯಲಿದೆ. ಹುಟ್ಟಿದ ಮಗು ಒಮ್ಮಿಂದೊಮ್ಮೆಲೇ ನಡೆಯಲಾರದು. ಅದು ಎಡವಿ ಬಿದ್ದಾಗ ಮಾತ್ರ ಅದಕ್ಕೆ ತಪ್ಪು ಹೆಜ್ಜೆಯ ಅರಿವಾಗುತ್ತದೆ. ನಮ್ಮ ಜೀವನದಲ್ಲಿಯೂ ಹಾಗೆಯೇ ಕೆಲವೊಂದು ತಪ್ಪಗಳೇ ನಮ್ಮನ್ನು ಉನ್ನತ ಮಟ್ಟಕ್ಕೆ ಬೆಳೆಸುತ್ತವೆ. ನೀವು ನಿಮ್ಮ ಹಾದಿಯಲ್ಲಿಯೇ ಮುಂದುವರಿಯಿರಿ. ಸರಿಯಾದುದನ್ನೇ ನಿಮ್ಮದಾಗಿಸಿಕೊಳ್ಳಿ. ಆಗ ತಪ್ಪು ಮರೆಯಾಗುತ್ತದೆ, ಯಶಸ್ಸು ನಿಮ್ಮ ಪಾಲಾಗುತ್ತದೆ.

ನೀವೇ ನಿಮ್ಮ ಜೀವನದ ಚಾಲಕರು ಆ ಚಾಲನೆಯ ಅಧಿಕಾರವನ್ನು ಮತ್ತು ಆ ಸ್ಥಳವನ್ನು ಬೇರೆಯವರು ಕದಿಯಲು ಅವಕಾಶ ಮಾಡಿಕೊಡಬೇಡಿ. ನೀವು ಜೀವನದಲ್ಲಿ ಗಿಣಿಯ ತರ ಇರಬೇಡಿ ಬದಲಿಗೆ ಹದ್ದುಗಳಾಗಿ ಇರಿ. ಗಿಣಿಯು ಅಧಿಕವಾಗಿ ಮಾತನಾಡುತ್ತದೆ. ಆದರೆ ಹದ್ದು ಶಾಂತವಾಗಿ ಇದ್ದು, ಅದಕ್ಕೆ ಆಕಾಶವನ್ನು ಮುಟ್ಟುವಂತಹ ಯೋಚನಾ ಶಕ್ತಿ ಇದೆ.

                                                                                                                                          – ಮಾರುತಿ (www.ctechguru.com)

PUC Science Portion Completed with in time.

One of nice coaching center in Kumta, teaching staffs are awesome and excellent and I am very happy to say that I am from this institution.

Thanks C-Tech Guru

–  Shreya, Kumta

 

I  paid fees amount was nominal, the learning atmosphere was nice, The facilities were very experienced persons. The location and the environment were good. So that was the reason I have chosen this institute, I feels joyful to joined here, I totally satisfied. I got 1st Rank for Nellikeri College.

–   K.R. Maruti