ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯಲ್ಲಿ ಒಂದು ಹೊಸ ಕ್ರಾಂತಿ.

16, ಜನವರಿ 2019 ರಂದು ನಡೆದ ಅಂತರ್ ಕಾಲೇಜು ಬ್ಯಾಂಕಿಂಗ್ ಲೇವೆಲ್ – 1 ಆನ್ಲೈನ್ ವಿದ್ಯುನ್ಮಾನ  ಅಣಕು ಪರೀಕ್ಷೆಯಲ್ಲಿ ವಿವಿಧ ಕಾಲೇಜುಗಳ ತರಬೇತಿ ಪಡೆದ  391 ವಿದ್ಯಾರ್ಥಿಗಳು ಭಾಗವಹಿಸಿದ್ದರು, ಸಂಜೆ 7 ಗಂಟೆಗೆ , ಮನೆಯಲ್ಲೇ ಕುಳಿತು ಮೊಬೈಲ್ ಗಳ ಮೂಲಕ ಪರೀಕ್ಷೆಯನ್ನು ಬರೆದರು. ಸಮಯದ ಮಿತಿಯನ್ನು ನಿಗದಿ ಪಡಿಸಲಾಗಿತ್ತು. ಇದು ವಿದ್ಯಾರ್ಥಿಗಳಿಗೆ ಒಂದು ಹೊಸ ಅನುಭವವನ್ನು ನೀಡಿತು. ಈ ರೀತಿ ಮೊಬೈಲ್ ಪರೀಕ್ಷಾ ವಿಧಾನವು ಪೋಷಕರ, ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಪ್ರಶಂಸೆಗೆ ಪಾತ್ರವಾಯಿತು.ಅದರಲ್ಲಿ ಟಾಪ್ ಟ್ವೆಂಟಿ ರಾಂಕ್  ಪಡೆದ ಕಾಲೇಜು ಮತ್ತು ವಿದ್ಯಾರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ. ವಿಜೇತ ವಿದ್ಯಾರ್ಥಿಗಳಿಗೆ ಕಾಲೇಜು ವರ್ಗ ಹಾಗೂ ctechguru ವತಿಯಿಂದ ಹಾರ್ದಿಕ ಅಭಿನಂದನೆಗಳು.

Module- 2  ತರಬೇತಿಗೆ ಭಾಗವಹಿಸಲಿಚ್ಛಿಸುವವರು ಫೆಬ್ರವರಿ,1, 2019 ರ ಒಳಗೆ ತಮ್ಮ ಹೆಸರನ್ನು  ಕಾಲೇಜಿನಲ್ಲಿ ನೋಂದಾಯಿಸಿಕೊಳ್ಳ ತಕ್ಕದ್ದು.

Module-1 ನಲ್ಲಿ ಭಾಗವಹಿಸಿರುವ ಶಿಬಿರಾರ್ಥಿಗಳನ್ನು ವಿಚಾರಿಸಿ, ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳಿ,

“ಭವಿಷ್ಯದಲ್ಲಿ ಕೊರಗಬೇಡಿ”

ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದೆ ಎಂದು ಕೊರಗುವುದು ಬೇಡ. ಮಾಡಿದ ತಪ್ಪನ್ನು ತಿದ್ದಿಕೊಳ್ಳುವುದು ಬಿಡೋದು ನಮ್ಮ ಕೈಯ್ಯಲಿದೆ. ಹುಟ್ಟಿದ ಮಗು ಒಮ್ಮಿಂದೊಮ್ಮೆಲೇ ನಡೆಯಲಾರದು. ಅದು ಎಡವಿ ಬಿದ್ದಾಗ ಮಾತ್ರ ಅದಕ್ಕೆ ತಪ್ಪು ಹೆಜ್ಜೆಯ ಅರಿವಾಗುತ್ತದೆ. ನಮ್ಮ ಜೀವನದಲ್ಲಿಯೂ ಹಾಗೆಯೇ ಕೆಲವೊಂದು ತಪ್ಪಗಳೇ ನಮ್ಮನ್ನು ಉನ್ನತ ಮಟ್ಟಕ್ಕೆ ಬೆಳೆಸುತ್ತವೆ. ನೀವು ನಿಮ್ಮ ಹಾದಿಯಲ್ಲಿಯೇ ಮುಂದುವರಿಯಿರಿ. ಸರಿಯಾದುದನ್ನೇ ನಿಮ್ಮದಾಗಿಸಿಕೊಳ್ಳಿ. ಆಗ ತಪ್ಪು ಮರೆಯಾಗುತ್ತದೆ, ಯಶಸ್ಸು ನಿಮ್ಮ ಪಾಲಾಗುತ್ತದೆ.

ನೀವೇ ನಿಮ್ಮ ಜೀವನದ ಚಾಲಕರು ಆ ಚಾಲನೆಯ ಅಧಿಕಾರವನ್ನು ಮತ್ತು ಆ ಸ್ಥಳವನ್ನು ಬೇರೆಯವರು ಕದಿಯಲು ಅವಕಾಶ ಮಾಡಿಕೊಡಬೇಡಿ. ನೀವು ಜೀವನದಲ್ಲಿ ಗಿಣಿಯ ತರ ಇರಬೇಡಿ ಬದಲಿಗೆ ಹದ್ದುಗಳಾಗಿ ಇರಿ. ಗಿಣಿಯು ಅಧಿಕವಾಗಿ ಮಾತನಾಡುತ್ತದೆ. ಆದರೆ ಹದ್ದು ಶಾಂತವಾಗಿ ಇದ್ದು, ಅದಕ್ಕೆ ಆಕಾಶವನ್ನು ಮುಟ್ಟುವಂತಹ ಯೋಚನಾ ಶಕ್ತಿ ಇದೆ.

                                                                                                                                          – ಮಾರುತಿ (www.ctechguru.com)

Posted in Uncategorized.

Leave a Reply

Your email address will not be published. Required fields are marked *