ಶಿಕ್ಷಣ ಕ್ಷೇತ್ರದಲ್ಲಿ ಉತ್ತರ ಕನ್ನಡದಲ್ಲಿ ಒಂದು ಹೊಸ ಬದಲಾವಣೆ(ಅತ್ಯುತ್ತಮ ತರಬೇತಿ, ಆಧುನಿಕ ತಂತ್ರಜ್ಞಾನ,)

ಕಳೆದ 20 ವರ್ಷಗಳಿಂದ ಕಂಪ್ಯೂಟರ್ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ  ತರಬೇತಿಗಳನ್ನು ನೀಡುತ್ತಾ,  ಉತ್ತರ ಕನ್ನಡದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆಯನ್ನು ಮಾಡುತ್ತ ಬಂದಿರುವ C-Tech Guru ಅತ್ಯುತ್ತಮ ಶಿಕ್ಷಣ ಸಂಸ್ಥೆ ಎಂಬ ಹೆಸರನ್ನು ಹೊಂದಿದೆ. ಉತ್ತರ ಕನ್ನಡದಲ್ಲಿ ಅತ್ಯುತ್ತಮ ಟ್ಯೂಶನ್ ಸೆಂಟರಿನ ಅನಿವಾರ್ಯತೆಯನ್ನು ಮನಗಂಡ ನಾವು ಕಳೆದ ವರ್ಷ  ಟ್ಯೂಷನ್ ಶಿಕ್ಷಣ ಕ್ಷೇತ್ರಕ್ಕೆ ಪಾದಾರ್ಪಣೆಯನ್ನು ಮಾಡಿರುತ್ತೇವೆ.

ಬೆಳೆಯ ಸಿರಿ ಮೊಳಕೆಯಲ್ಲಿ ಎಂಬಂತೆ ಟ್ಯೂಷನ್   ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿರುವ ನಮ್ಮ ಟ್ಯೂಷನ್ ಸೆಂಟರ್ ನ ಸಾಧನೆ ಜನರ ಹುಬ್ಬೇರುವಂತೆ ಮಾಡಿದೆ. ಎಸ್. ಎಸ್. ಎಲ್. ಸಿ ಹಾಗೂ ಪಿಯುಸಿ 1ನೇ ವರ್ಷದ ಸಾಯನ್ಸ್ ತರಗತಿಯಲ್ಲಿ ಕಡಿಮೆ ಫಲಿತಾಂಶ ಪಡೆದಿರುವಂತ ವಿದ್ಯಾರ್ಥಿಗಳನ್ನೇ      ಗುರಿಯಾಗಿಸಿಕೊಂಡು ಉತ್ತಮ ತರಬೇತಿಯನ್ನು ನೀಡಿ ನಮ್ಮ ಪ್ರತಿಯೊಬ್ಬ (100%) ವಿದ್ಯಾರ್ಥಿಗಳು Distinction ಶ್ರೇಣಿಯಲ್ಲಿ                           ಉತ್ತೀರ್ಣರಾಗುವಂತೆ  ಹಾಗೂ ನಮ್ಮ ಒಬ್ಬ ವಿದ್ಯಾರ್ಥಿ ರಾಜ್ಯ ಮಟ್ಟದಲ್ಲಿ Rank ಪಡೆಯುವಂತೆ ಸಹಕರಿಸಿದ    ನಮ್ಮ ನುರಿತ ಶಿಕ್ಷಕ ವೃಂದ ಹಾಗೂ ನಮ್ಮವಿದ್ಯಾರ್ಥಿ ಮಿತ್ರರು ನಮ್ಮ ವಿದ್ಯಾ ಸಂಸ್ಥೆಯಾದ ಸಿ-ಟೆಕ್ ಗುರು ಟ್ಯೂಷನ್ ಕ್ಲಾಸ್ ಕುಮಟಾ ದ ಗೌರವ ಹೆಚ್ಚಿಸಿದ್ದಾರೆ.

ನಮ್ಮ ವಿದ್ಯಾರ್ಥಿಗಳ ಉತ್ತಮ ಅಭಿವೃದ್ಧಿ ನಮ್ಮ ಟ್ಯೂಷನ್ ಧ್ಯೇಯ.

ವಿದ್ಯಾರ್ಥಿಗಳಿಗೆ ವಿಶೇಷ ಸೂಚನೆ  : ಯಾವುದೇ ಟ್ಯೂಶನ್ ಸೆಂಟರಿನ ಪ್ರವೇಶ ಪಡೆಯುವ ಮೊದಲು  ಕ್ಲಾಸಿನ ಗುಣಮಟ್ಟವನ್ನು  ಪರಿಶೀಲಿಸಿ ಆಮೇಲೆ ಶುಲ್ಕವನ್ನು ನೀಡಿ ನೊಂದಾಯಿಸಿಕೊಳ್ಳಿ. ಯಾರ ಮಾತಿಗೂ ಮರುಳಾಗಬೇಡಿ,  ಉತ್ತಮ ಟ್ಯೂಶನ್ ಸೆಂಟರ್ ಅನ್ನು ಆಯ್ಕೆ ಮಾಡಿ ಉಜ್ವಲ ಭವಿಷ್ಯ ವನ್ನು ಹೊಂದಿರಿ.

Posted in Uncategorized.

Leave a Reply

Your email address will not be published. Required fields are marked *